1.
ಏಳಿ ಎದ್ದೇಳಿ
ನಾನು ಎನ್ನುವ ಜಗದಲ್ಲಿ
ನಾವಾಗಿ ಬಾಳೋಣ
ನನ್ನದೆಂಬುದನೆಲ್ಲ
ನಮ್ಮದೆನ್ನುತ
ಸಹಬಾಳ್ವೆಯ ಮಹತ್ವ ಸಾರೋಣ.
- ನಂದೀಶ ಎಸ್. ಆರ್. ಎನ್.
4. Motivational_story
ಒಮ್ಮೆ ನಾಲ್ಕು ಮೇಣದ ಬತ್ತಿಗಳು ತಮ್ಮತಮ್ಮಲ್ಲಿ ಮಾತನಾಡುತ್ತಿರುತ್ತವೆ.
ಮೊದಲನೆಯದು 'ಶಾಂತಿ' :
ಹೇಳುತ್ತದೆ ಜಗತ್ತಿನಲ್ಲಿ ನನಗೆ ಬೆಲೆಯೇ ಇಲ್ಲ, ಎಲ್ಲೆಲ್ಲೂ ಜಗಳ,ದ್ವೇಷ, ನಾನು ಇರರುವುದಿಲ್ಲ ಎಂದು ಆರಿ ಹೋಗುತ್ತದೆ.
ಎರಡನೆಯದು 'ನಂಬಿಕೆ' ಹೇಳುತ್ತದೆ :
ಮೊದಲಿನಂತೆ ಈಗ ಜನರಲ್ಲಿ ಪರಸ್ಪರ ನಂಬಿಕೆಗಳು ಉಳಿದಿಲ್ಲ, ನನ್ನ ಅವಶ್ಯಕತೆ ಇವರಿಗೆ ಇಲ್ಲ ಎಂದು ಹೇಳಿ ಬೆಳಕು ಆರಿ ಹೋಗುತ್ತದೆ.
ಮೂರನೆಯದು 'ಪ್ರೀತಿ' :
ಇದೇ ರೀತಿ ದುಃಖ ವ್ಯಕ್ತಪಡಿಸಿ, ಜನ ಪರಸ್ಪರ ಪ್ರೀತಿಸುವುದನ್ನೇ ಮರೆತಿದ್ದಾರೆ,ನನ್ನ ಅವಶ್ಯಕತೆ ಇವರಿಗೆ ಇಲ್ಲ ಎಂದು ಆರಿ ಹೋಗುತ್ತದೆ.
ಆ ಕೊಠಡಿಗೆ ಬರುವ ಮಗುವೊಂದು ಉರಿಯಬೇಕಿದ್ದ ಮೇಣದ ಬತ್ತಿಗಳು ಆರಿದ್ದಕ್ಕೆ ಅಳುತ್ತದೆ. ಆಗ
ನಾಲ್ಕನೆಯ ಮೇಣವು ಹೇಳುತ್ತದೆ:
ಅಳಬೇಡ ಕಂದ, ನನ್ನನ್ನು ಉಪಯೋಗಿಸಿ ಆ ಮೂರನ್ನು ಮತ್ತೆ ಹತ್ತಿಸಬಹುದು ಎಂದು ಹೇಳುತ್ತದೆ.ಆ ಮಗು ಅದರಿಂದ ಆರಿ ಹೋಗಿದ್ದ ಮೇಣಗಳನ್ನು ಹಚ್ಚುತ್ತದೆ....ಅದರ ಹೆಸರೇ ''ಭರವಸೆ'.
ಆದ್ದರಿಂದ ಜೀವನದಲ್ಲಿ ಎಲ್ಲಾ ಹೋದರೂ ಭರವಸೆ ಮಾತ್ರ ಕಳೆದುಕೊಳ್ಳಬಾರದು. ಇದೊಂದರಿಂದ ಮಿಕ್ಕ ಮೂರನ್ನು ಬೆಳಗಿಸಬಹುದು.
5.*"ಕಾಲ ಯಾವತ್ತು ಒಂದೇ ರೀತಿ ಇರಲ್ಲ,*
*ಈದಿನ ಸೋತವರು ನಾಳೆ ಗೆಲ್ಲ್ತಾರೆ.*
*ಕಾಲ ನಮಗಾಗಿ ಕಾಯಲ್ಲ,*
*ಕಾಲದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಧೃಡ ಮನಸ್ಸಿನಿಂದ ಮುನ್ನಡೆದರೆ ಗೆಲುವಿನ ಬಾಗಿಲು ನಮಗಾಗಿ ತೆರೆದಿರುತ್ತದೆ.*
*ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ,*
*ಆದರೆ ಕಷ್ಟಪಟ್ಟು ಏರಿದರೆ*
*ಅದು ನಮ್ಮ ಪಾದದ ಕೆಳಗೆ* *ಇರುತ್ತದೆ. ನಡೆ, ಮುನ್ನಡೆ*
🙏🏻ಶುಭ ಮುಂಜಾನೆ 🙏🏻
🍃🍂ಶುಭ ದಿನ🍂🍃
👉ಸ್ನೇಹ ಜೀವಿ👈