ಕನ್ನಡ
ದ್ರಾವಿಡ ಭಾಷೆ ಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನಗಳು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನಗಳ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ಹೆಚ್ಚಿನ ರಾಜಾಶ್ರಯ ಪಡೆಯಿತು.ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.ಭಾಷಿಕ ಚರಿತ್ರೆ
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;
- ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ,
- ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು
- ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.[೧೫]
ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.
- ಪೂರ್ವದ ಹಳಗನ್ನಡ - ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ
- ಹಳಗನ್ನಡ - ೭ರಿಂದ ೧೨ನೆಯ ಶತಮಾನದವರೆಗೆ
- ನಡುಗನ್ನಡ - ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ
- ಹೊಸಗನ್ನಡ - ೧೮ನೆಯ ಶತಮಾನದ ಆದಿಯಿಂದ ಈಚೆಗೆ
ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.
ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ.[೧೬][೧೭][೧೮][೧೯][೨೦] ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥವಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ.
ಸಂಸ್ಕೃತದ ಪ್ರಭಾವ
- ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು.[೨೧]
- ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ. [೨೧][೨೨]
- ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ.
[೨೩] ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.[೨೪]
ಸಾಹಿತ್ಯ
ಹಳಗನ್ನಡ
ತ್ರಿಪದಿ ಛಂಧಸ್ಸಿನಲ್ಲಿ ರಚನೆಗೊಂಡ ಕನ್ನಡದ ಮೊದಲ ಕವಿತೆ ಕ್ರಿ.ಶ. ೭೦೦ರ ಕಪ್ಪೆ ಅರಭಟ್ಟನ ಶಾಸನದಲ್ಲಿ ಕಂಡುಬರುತ್ತದೆ. [೨೫] ರಾಜಾ ನೃಪತುಂಗ ಅಮೋಘ ವರ್ಷ ರಚಿಸಿದ ಕವಿರಾಜಮಾರ್ಗ ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಒಳಗೊಂಡಂಥ ಈ ಕೃತಿ ಆ ಕಾಲದಲ್ಲಿ ಅಸ್ತಿತ್ವದಲ್ಲಿ ಕನ್ನಡದ ಉಪಭಾಷೆಗಳನ್ನು ಒಂದೆಡೆ ಸೇರಿವ ಪ್ರಯತ್ನ ಮಾಡಿದೆ. ಈ ಕೃತಿ ಕ್ರಿ.ಶ. ೬ನೆಯ ಶತಮಾನದ ರಾಜ ದುರ್ವಿನೀತನ ಬಗ್ಗೆಯೂ ಕ್ರಿ. ೬೩೬ರ ಐಹೊಳೆ ಶಾಸನ ಬರೆದ ರವಿಕೀರ್ತಿಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ. [೨೬][೨೭] ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಕೃತಿ ವ್ಯಾಕರಣವನ್ನು ವಿವರಿಸುವಂಥದ್ದೂ ವಿವಿಧ ಕನ್ನಡ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುವುದರಿಂದಲೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಅದಕ್ಕಿಂತಲೂ ಕೆಲ ಶತಮಾನಗಳ ಹಿಂದೆಯೇ ಆರಂಭಗೊಂಡಿರಬಹುದೆಂದು ಊಹಿಸಬಹುದಾಗಿದೆ. [೨೬][೨೮] ಕ್ರಿ.ಶ. ೯೦೦ರಲ್ಲಿ ಶಿವಕೋಟ್ಯಾಚಾರ್ಯರು ರಚಿಸಿದ ವಡ್ಡಾರಾಧನೆ ಎಂಬ ಗದ್ಯಕೃತಿಯಲ್ಲಿ ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳು ಲಭ್ಯವಾಗುತ್ತವೆ.[೨೯] ಪಂಪನ ಕವಿಯು ಬರೆದ ವಿಕ್ರಮಾರ್ಜುನ ವಿಜಯಂ ಹಾಗೂ ಇನ್ನಿತರ ಕೃತಿಗಳು ಇವೆ.
ನಡುಗನ್ನಡ
- ಹದಿನೈದನೆಯ ಮತ್ತು ಹದಿನೆಂಟನೆಯ ಶತಮಾನದ ನಡುವಣ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯದ ಉಚ್ಛ್ರಾಯ ಕಾಲವಾಗಿತ್ತು. ಆ ಕಾಲದ ಅತ್ಯಂತ ಶ್ರೇಷ್ಠನೆನಿಸಿಕೊಂಡ ಕವಿ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಎಂಬ ಕೃತಿಯೊಂದಿಗೆ ವಿಶ್ವವಿಖ್ಯಾತನಾದನು. ಮಹಾಭಾರತವನ್ನು ಆಧರಿಸಿದ ಕೃತಿ ಭಾಮಿನಿ ಷಟ್ಪದಿ ಛಂದಸ್ಸಿನ ಪದ್ಯಗಳನ್ನೊಳಗೊಂಡಿದೆ.[೩೦] ಈ ಕಾಲದಲ್ಲಿ ಕನ್ನಡದ ಮೇಲೆ ಸಂಸ್ಕೃತದ ಧಾರ್ಮಿಕವೂ ಸಾಮಾಜಿಕವೂ ಆದ ಪ್ರಭಾವ ಮೂರ್ಧನ್ಯಾವಸ್ಥೆಯಲ್ಲಿತ್ತು.[೩೧][೩೨][೩೩]
- ಈ ಕಾಲದಲ್ಲಿ ರಾಜ್ಯಾಡಳಿತ ಮತ್ತು ಜಮೀನ್ದಾರಿಗೆ ಸಂಬಂಧಿಸಿದ ಮರಾಠಿ ಮತ್ತು ಹಿಂದಿ ಭಾಷೆಯ ಹಲವಾರು ಶಬ್ದಗಳು ಕನ್ನಡದಲ್ಲಿ ಬಳಕೆಗೆ ಬಂದುವು.[೩೪]
- ಕನಕ ದಾಸರು, ಪುರಂದರ ದಾಸರು, ನರಸಿಂಹ ತೀರ್ಥರು, ವ್ಯಾಸತೀರ್ಥರು, ಶ್ರೀಪಾದ ರಾಯರು, ವಾದಿರಾಜ ತೀರ್ಥರು, ವಿಜಯ ದಾಸರು, ಜಗನ್ನಾಥ ದಾಸರು, ಪ್ರಸನ್ನವೆಂಕಟ ದಾಸರೇ ಮೊದಲಾದ ವೈಷ್ಣವ ಸಂತರು ಕನ್ನಡದಲ್ಲಿ ದಾಸರ ಪದಗಳೆಂದು ಖ್ಯಾತವಾದ ಶ್ರೇಷ್ಠ ಭಕ್ತಿಕಾವ್ಯಗಳನ್ನು ರಚಿಸಿದರು. . ಅವುಗಳಲ್ಲಿ ಹೆಚ್ಚಿನವು ಇಂದಿಗೆ ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಆದರಿಸಲ್ಪಡುವ ಕೃತಿಗಳಾಗಿವೆ.[೩೫] ಕನಕ ದಾಸರ ರಾಮಧಾನ್ಯ ಚರಿತೆ ಎಂಬ ಕೃತಿಯಲ್ಲಿ ಧಾನ್ಯಗಳ ರೂಪಕದೊಂದಿಗೆ ವರ್ಗ ಸಂಘರ್ಷವನ್ನು ಸೂಚಿಸಿರುವುದು ಮನಗಾಣಬಹುದು. [೩೬]
- ಇಲ್ಲಿ ಹೆಸರಿಸಲಾದ ಮತ್ತು ಇತರ ವೈಷ್ಣವ ಸಂತರು / ಹರಿದಾಸರು ತಮ್ಮ ದಾಸಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೂ ಆ ಮೂಲಕ ಕರ್ಣಾಟಕ ಸಂಗೀತಕ್ಕೂ ಶ್ರೇಷ್ಠವೆನಿಸಿದ ಕೊಡೂಗೆಗಳನ್ನು ನೀಡಿದರು. ಇವರಲ್ಲಿ ಅತ್ಯಂತ ಪ್ರಸಿದ್ಧರಾದವರು ಕರ್ಣಾಟಕ ಸಂಗೀತದ ಪಿತಾಮಹ ಎಂದು ಖ್ಯಾತರಾದ ಪುರಂದರದಾಸರು.[೩೭][೩೮][೩೯]
ಹೊಸಗನ್ನಡ
- ಹತ್ತೊಂಬತ್ತನೆಯ ಶತಮಾನದ ನಂತರದ ಕನ್ನಡ ಕೃತಿಗಳ ಭಾಷೆಯಲ್ಲಿ ಗಮನಾರ್ಹ ವ್ಯತ್ಯಯ ಕಂಡುಬಂದಿತು. ಈ ಬಗೆಯಲ್ಲಿ ರೂಪುಗೊಂಡ ಕನ್ನಡ ಭಾಷೆಯನ್ನು ಹೊಸಗನ್ನಡ ಎಂದು ಕರೆಯುತ್ತೇವೆ. ಹೊಸಗನ್ನಡ ಬರಹಗಾರರಲ್ಲಿ ಅತ್ಯಂತ ಪ್ರಮುಖನಾದವನು ಮುದ್ದಣ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧನಾದ ನಂದಳಿಕೆ ಲಕ್ಷ್ಮಿನಾರಣಪ್ಪ. ಮುದ್ದಣನ ಕಾವ್ಯ ಕನ್ನಡದಲ್ಲಿ ಹೊಸದೊಂದು ಪರಂಪರೆಗೆ ನಾಂದಿಯಾಗಿದ್ದರೂ ಭಾಷಾವಿದಗ್ಧರು ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು ಎಂಬ ಕೃತಿಯನ್ನು ಹೊಸಗನ್ನಡದ ಮೊದಲ ಕೃತಿಯನ್ನು ಗುರುತಿಸುತ್ತಾರೆ. ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. *೧೮೨೦ರಲ್ಲಿ ಜೋನ್ ಹಾನ್ಸ್ ಬೈಬಲಿನ ಕನ್ನಡದ ಅನುವಾದವನ್ನು ಪ್ರಕಟಿಸಿದರು. [೪೦]
- ಅಚ್ಚುಗೊಂಡ ಮೊದಲ ಕಾದಂಬರಿ ಪಿಲ್‍ಗ್ರಿಂಸ್ ಪ್ರೋಗ್ರೆಸ್ ಎಂಬ ಕೃತಿಯಾಗಿದೆ. ಕಾನರೀಸ್ ಪ್ರೋವರ್ಬ್ಸ್ (ಕನ್ನಡ ಗಾದೆಗಳು) ಎಂಬ ಕೃತಿಯೂ ಮೇರಿ ಮಾರ್ತ್ ಷೆರ್ವುಡ್ ಬರೆದ ದ ಹಿಸ್ಟರಿ ಆಫ್ ಹೆನ್ರಿ ಅಂಡ್ ಹಿಸ್ ಬೇರರ್ ಎಂಬ ಕೃತಿಯೂ ಕ್ರಿಸ್ತಿಯನ್ ಗೋತ್ಲೋವ್ ಬಾರ್ತನು ಬರೆದ ಬೈಬಲ್ ಸ್ಟೋರೀಸ್ ಮತ್ತು ಕನ್ನಡ ಸ್ತೋತ್ರ ಪುಸ್ತಕ ಇಲ್ಲಿ ಪ್ರಕಾಶನಗೊಂಡವು.[೪೧]
- ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಪ್ರಮುಖವಾದುವು ನವೋದಯ. ನವ್ಯ, ನವ್ಯೋತ್ತರ, ದಲಿತ, ಬಂಡಾಯ ಎಂಬಿವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಲಿದೆ. ಅಷ್ಟಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಆದ ಕುವೆಂಪು, ದ.ರಾ.ಬೇಂದ್ರೆ, ವಿ.ಕೃ. ಗೋಕಾಕ್ ಮುಂತಾದ ಕವಿಗಳೂ ಸಾಹಿತಿಗಳೂ ಬಾಳಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಸಾರಿ ಜ್ಞಾನಪೀಠ ಪುರಸ್ಕಾರ ದೊರೆತಿದೆ. [೪೨]
- ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರವು ಎಂಟು ಬಾರಿ ಕನ್ನಡ ಭಾಷೆಗೆ ದೊರೆಯಿತು. [೪೩] ಹಲವು ಬಾರಿ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರಗಳೂ ಕನ್ನಡ ಭಾಷೆಗೆ ಲಭ್ಯವಾಗಿವೆ. ದಿಲ್ಲಿಯ ಕೆ. ಕೆ. ಬಿರ್ಲಾ ಫೌಂಡೇಷನ್ ಕೊಡಮಾಡುವ ಸರಸ್ವತಿ ಸಮ್ಮಾನವೂ [೪೪] ಕನ್ನಡ ಭಾಷೆಗೆ ಲಭ್ಯವಾಗಿದೆ. ಎಸ್. ಎಲ್. ಭೈರಪ್ಪನವರ ಮತ್ತು ಶಿವರಾಮ ಕಾರಂತರ ಕೃತಿಗಳು ಭಾರತದ ಹದಿನಾಲ್ಕು ಭಾಷೆಗಳಲ್ಲಿ ಅನುವಾದಗೊಂಡಿವೆ.
ಕನ್ನಡ ಉಪಭಾಷೆಗಳು
- ಬರೆಯಲು ಉಪಯೋಗಿಸುವ ಮತ್ತು ಮಾತನಾಡುವ ಭಾಷೆಯಲ್ಲಿ ಇರುವ ವ್ಯತ್ಯಾಸ ಇತರ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲಿಯೂ ಇದೆ. ಮಾತನಾಡಲು ಉಪಯೋಗಿಸುವ ಕನ್ನಡ ಪ್ರದೇಶಕ್ಕೆ ಅನುಸಾರವಾಗಿ ಬದಲಾಗುತ್ತದೆ. ಆದರೆ ಬರೆಯಲು ಉಪಯೋಗಿಸುವ ಕನ್ನಡ ಕರ್ಣಾಟಕದ ಹೆಚ್ಚಿನ ಎಲ್ಲೆಡೆ ಒಂದೇ ಬಗೆಯದಾಗಿದೆ. ಕುಂದಗನ್ನಡ,ಕೋಟಗನ್ನಡ, ಹವ್ಯಕ ಕನ್ನಡ, ಅರೆಭಾಷೆ(ಗೌಡಕನ್ನಡ), ಸೋಲಿಗ ಕನ್ನಡ ಎನ್ನುವಂಥ ಇಪ್ಪತ್ತರಷ್ಟು ಉಪಭಾಷೆಗಳು ಕನ್ನಡಕ್ಕಿವೆ.[೪೫]
- ಇವುಗಳಲ್ಲಿ ಕುಂದಗನ್ನಡ ಕುಂದಾಪುರದ ಸಮೀಪ ಮಾತನಾಡಲು ಉಪಯೋಗಿಸುವ ಭಾಷೆಯಾಗಿದ್ದು ಇದರಂತೆಯೇ ಹವ್ಯಕ ಮತ್ತು ಸೋಲಿಗ ಕನ್ನಡ ಆಯಾ ಸಮುದಾಯಕ್ಕೆ ಸೇರಿದವರು ಮಾತನಾಡಲು ಉಪಯೋಗಿಸುವ ಭಾಷೆಯಾಗಿದೆ. ಹೀಗೆ ಪ್ರದೇಶಕ್ಕೂ ಸಮುದಾಯಕ್ಕೂ ಅಳವಟ್ಟ ಇತರ ಕನ್ನಡ ಉಪಭಾಷೆಗಳೆಂದರೆ ನಾಡವ ಕನ್ನಡ, ಮಲೆನಾಡ ಕನ್ನಡ, ಧಾರವಾಡದ ಕನ್ನಡ ಮುಂತಾದುವುಗಳು.
- ಕನ್ನಡದ ಒಂದು ಉಪಭಾಷೆಯಂತೆಯೇ ತೋರಿಬರುವ ಭಾಷೆಯೆಂದರೆ ಬಡಗ ಭಾಷೆ. ಬಡಗ ಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ೧೮೯೦ರಲ್ಲೇ ಉಪಯೋಗಿಸಲಾಗುತ್ತಿತ್ತು.[೪೬] ಬಡಗ ಮಾತ್ರವಲ್ಲದೆ ಕನ್ನಡದೊಂದಿಗೆ ನಿಕಟ ಸಾಮ್ಯವನ್ನು ಹೊಂದಿರುವಂಥ ಭಾಷೆಗಳಾಗಿವೆ ಹೊಲಿಯ ಮತ್ತು ಉರಾಳಿ.
ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ
- 'ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬ ಗ್ರಂಥದ ಪ್ರಕಾರ ಕನ್ನಡ ಭಾಷೆ ಒಂದು ಗುಪ್ತಭಾಷೆಯಾಗಿದ್ದಿತು. (ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದಕಾಲದಿಂದ ಕನ್ನಡವೂ ಸೇರಿದಂತೆ ೪ ಗುಪ್ತಭಾಷೆಗಳು ಇದ್ದುವು). ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ.
- "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿಯ ಭಾಷೆಯಾಗಿ ಬೆಳೆಯುತ್ತಿದೆ.
ಉದಾಹರಣೆಗೆ:
ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು
ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ
ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ
ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ
ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ
ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂದೆನ್ನುವುದನು ಕಲಿಸಿದನು
ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ
ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ
ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು
ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ
ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ
ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ
ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ
ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂದೆನ್ನುವುದನು ಕಲಿಸಿದನು
ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ
ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ
ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು
ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ
ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ
ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ
ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ
ಭೌಗೋಳಿಕ ವ್ಯಾಪಕತೆ
- ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತಿದೆ ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಕೇರಳ, ಗೋವಾ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರೆ) ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಮತ್ತು ಕೊಲ್ಲಿ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ.
- ಇವರಲ್ಲಿ ಹೊರದೇಶಗಳಲ್ಲಿ ವಾಸಿಸುತ್ತಿರುವವರು ಉದ್ಯೋಗ ನಿಮಿತ್ತ ಕರ್ನಾಟಕದಿಂದ ವಲಸೆ ಹೋದವರಾಗಿದ್ದಾರೆ. ಇಂದಿಗೆ ಕೇರಳದಲ್ಲಿರುವ ಕಾಸರಗೋಡು ೧೯೫೬ರ ಭಾಷಾವಾರು ಪ್ರಾಂತ್ಯ ವಿಂಗಡಣೆಗಿಂತ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು.
ಅಧಿಕೃತ ಮಾನ್ಯತೆ ಮತ್ತು "ಅಭಿಜಾತ ಭಾಷೆ (ಚೆನ್ನುಡಿ)"
ಸಂಸ್ಕೃತಿ ಸಚಿವಾಲಯ ನೇಮಿಸಿದ ಭಾಷಿಕ ನಿಪುಣರು ಶಿಫಾರಸ್ಸುಗಳನ್ನು ಅನುಮೋದಿಸುತ್ತ ಕೇಂದ್ರ ಸರಕಾರ ಕನ್ನಡ ಭಾಷೆಗೆ ಅಭಿಜಾತ ಭಾಷೆ ಎಂಬ ಗೌರವವನ್ನಿತ್ತು ಆದರಿಸಿತು.[೪೭][೪೮]ಅದಲ್ಲದೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನವೂ ಕನ್ನಡಕ್ಕೆ ದೊರೆಯಿತು.[೪೯]ಜುಲೈ 2011ರಲ್ಲಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆಯಲ್ಲಿ ಅಭಿಜಾತ ಕನ್ನಡದ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಆರಂಭಗೊಂಡಿತು.[೫೦]
ನಿಘಂಟು
ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ. [೫೧] ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡ ಭಾಷೆಯ ಮೂರು ಉಪಭಾಷೆಗಳನ್ನೊಳಗೊಂಡ ಪ್ರಧಾನ ವ್ಯಾಕರಣವನ್ನು ವಿವರಿಸುವ ಗ್ರಂಥವೊಂದನ್ನೂ ರಚಿಸಿದ್ದಾರೆ. [೫೨]
ಹೊಸಗನ್ನಡ ಕಾಲಘಟ್ಟದಲ್ಲಿ ಮೊದಲ ಕನ್ನಡ-ಕನ್ನಡ ನಿಘಂಟು ರಚಿಸಿದವರು ಪ್ರೊ.ಜಿ.ವೆಂಕಟಸುಬ್ಬಯ್ಯ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ೯,೦೦೦ಕ್ಕೂ ಅಧಿಕ ಪುಟಗಳನ್ನೊಳಗೊಂಡ ಈ ನಿಘಂಟು ಒಂಬತ್ತು ಸಂಪುಟಗಳಲ್ಲಿ ಬಿಡುಗಡೆಗೊಂಡಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ-ಇಂಗ್ಲೀಷ್ ನಿಘಂಟನ್ನೂ ಕ್ಲಿಷ್ಟ ಪದಕೋಶ ಎಂಬ ಕನ್ನಡದ ಕ್ಲಿಷ್ಟ ಪದಗಳನ್ನೊಳಗೊಂಡ ನಿಘಂಟನ್ನೂ ರಚಿಸಿದ್ದಾರೆ.[೫೩][೫೪]
ಮೂಲ-ದ್ರಾವಿಡ | |||||||||||||||||||||||||
ಮೂಲ-ದಕ್ಷಿಣ-ದ್ರಾವಿಡ | ಮೂಲ-ದಕ್ಷಿಣ-ಮಧ್ಯ ದ್ರಾವಿಡ | ||||||||||||||||||||||||
ಮೂಲ-ತಮಿಳು-ಕನ್ನಡ | ಮೂಲ-ತೆಲುಗು | ||||||||||||||||||||||||
ಮೂಲ-ತಮಿಳು-ತೋಡ | ಮೂಲ-ಕನ್ನಡ | ಮೂಲ-ತೆಲುಗು | |||||||||||||||||||||||
ಮೂಲ-ತಮಿಳು-ಕೊಡವ | ಕನ್ನಡ | ತೆಲುಗು | |||||||||||||||||||||||
ಮೂಲ-ತಮಿಳು-ಮಲೆಯಾಳ | |||||||||||||||||||||||||
ಮೂಲ-ತಮಿಳು | ಮಲೆಯಾಳ | ||||||||||||||||||||||||
ತಮಿಳು | |||||||||||||||||||||||||
ಈ ರೇಖಾಚಿತ್ರ ದಕ್ಷಿಣ ಭಾರತದಲ್ಲಿ ಪ್ರಚಲಿತವಾಗಿರುವ ಪ್ರಮುಖ ದ್ರಾವಿಡ ಭಾಷೆಗಳ ವಂಶಾವಳಿಯನ್ನು
ನಿರೂಪಿಸುತ್ತದೆ.
ನಿರೂಪಿಸುತ್ತದೆ.
ಕನ್ನಡ ಅಕ್ಷರಮಾಲೆ
ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿ ಸುಮಾರು ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿಗೆ ಕನ್ನಡ ಲಿಪಿಯೊಂದಿಗೆ ನಿಕಟವಾದ ಹೋಲಿಕೆಯಿದೆ ಮತ್ತು ಈ ಎರಡು ಲಿಪಿಗಳ ಮೂಲ ಒಂದೇ ಆಗಿದೆ. ಕನ್ನಡ ಮತ್ತು ತೆಲುಗು ಲಿಪಿಗಳೆರಡೂ ಕದಂಬ ಲಿಪಿಯಿಂದ ರೂಪುಗೊಂಡಂಥವು. ಕನ್ನಡ ಲಿಪಿ ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಇಂಗ್ಲೀಷಿನಂಥ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ. ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರ ಲಿಪಿಯಿಂದ ಹಿಡಿದು ಇಂದಿನ ಮುದ್ರಣ ಮತ್ತು ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಬ್ರಾಹ್ಮಿ ಲಿಪಿಯೇ ಮೂಲ. ಕನ್ನಡದ ಅಕ್ಷರ ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಬಗೆಯನ್ನು ವಿಸ್ತೃತ ಅಧ್ಯಯನಗಳು ನಡೆದಿವೆ. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇಂಥ ಅಧ್ಯಯನಗಳ ಸಹಾಯದೊಂದಿಗೆ ಅಕ್ಷರಗಳು ಮಾರ್ಪಟ್ಟ ಬಗೆಯನ್ನು ಕಂಡರಿಯಲು ಸಾಧ್ಯವಿದೆ. ಮುದ್ರಣದ ಆರಂಭದೊಂದಿಗೆ ಕನ್ನಡ ಲಿಪಿಗೆ ಈಗಿನ ರೂಪ ನೆಲೆನಿಂತಿರುವುದು ಗಮನಾರ್ಹ. ಪ್ರಪಂಚದಲ್ಲಿರುವ ೧೮ ಬಗೆಯ ಲಿಪಿಗಳಲ್ಲಿ ೮ ಅಕ್ಷರ ಲಿಪಿಗಳು. ಉಳಿದಂತೆ ಚಿತ್ರಲಿಪಿಯೇ ಮುಂತಾದುವುಗಳನ್ನು ಕಾಣಬಹುದು. ಭಾರತದಲ್ಲಿ ಅನೇಕ ಭಾಷೆಗಳವು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಲಿಪಿಗಳಾಗಿವೆ. ಪಾರ್ಸೋ-ಅರಬ್ಬಿ ಲಿಪಿಗಳೂ ಭಾರತದಲ್ಲಿ ರೂಢಿಯಲ್ಲಿವೆ. ಉದಾ: ಉರ್ದು, ಕಾಶ್ಮೀರಿ ಮತ್ತು ಪುಷ್ತು.
ಕನ್ನಡ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:
|
|
ಅವರ್ಗೀಯ ವ್ಯಂಜನಗಳು | ||||||||||||||
---|---|---|---|---|---|---|---|---|---|---|---|---|---|---|
ಅವರ್ಗೀಯ ವ್ಯಂಜನಗಳು | ಯ | ರ | ಲ | ವ | ಶ | ಷ | ಸ | ಹ | ಳ |
ಹೀಗೆ ಒಟ್ಟು ೪೯ ವರ್ಣಗಳು ಕನ್ನಡದಲ್ಲಿರುವಂಥವು.
ವರ್ಣ ವಿಂಗಡಣೆ
ವಿಭಜಿಸಲು ಸಾಧ್ಯವಿಲ್ಲದ ಧ್ವನಿಯನ್ನು ವರ್ಣವೆನ್ನಲಾಗುತ್ತದೆ ಮತ್ತು ಭಾಷೆಯ ಅತ್ಯಂತ ಕಿರಿಯ ಅಂಶವನ್ನು ಸ್ವರವೆಂದು ಕರೆಯಲಾಗುತ್ತದೆ. (ಉದಾಃ ವಸ್ತ್ರ = ವ್+ಅ+ಸ್+ತ್+ರ್+ಅ) ಸ್ವತಂತ್ರವಾಗಿ ಉಚ್ಚರಿಸಬಹುದಾದ ವರ್ಣಗಳನ್ನು ಸ್ವರಗಳೆಂದೂ ಇತರ ವರ್ಣಗಳ ಸಹಾಯದಿಂದ ಉಚ್ಚರಿಸಬಹುದಾದ ವರ್ಣಗಳನ್ನೂ ವ್ಯಂಜನಗಳೆಂದೂ ಕರೆಯಲಾಗುತ್ತದೆ.
ಸ್ವರಗಳ ವಿಧಗಳು
- ಸ್ವರಗಳನ್ನು ಅವುಗಳ ಉಚ್ಚಾರಣೆಗೆ ತೆಗೆದುಕೊಳ್ಳುವ ಕಾಲಾವಧಿಯನ್ನು ಅವಲಂಬಿಸಿ ಹ್ರಸ್ವಸ್ವರಗಳು, ಮತ್ತು ದೀರ್ಘಸ್ವರಗಳು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.
- ಹ್ರಸ್ವ ಸ್ವರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಛಂದಸ್ಸಿನಲ್ಲಿ ಒಂದು ಮಾತ್ರೆಯ ಕಾಲ ಎಂದು ಕರೆಯಲಾಗಿದೆ.
ಉದಾಹರಣೆಗೆ: ಅ, ಇ, ಉ, ಋ, ಎ, ಒ
- ದೀರ್ಘಸ್ವರಗಳ ಉಚ್ಚಾರಣೆಗೆ ಎರಡು ಮಾತ್ರೆಗಳ ಕಾಲವನ್ನು ತೆಗೆದುಕೊಳ್ಳುತ್ತೇವೆ.
ಉದಾಹರಣೆಗೆ: ಆ, ಈ, ಊ, ೠ, ಏ, ಐ, ಓ, ಔ
- "ಋ"ಕಾರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ಮಾತ್ರ ಕಾಣುತ್ತೇವೆ.
ಉದಾಹರಣೆಗೆ: ಋಷಿ, ಋಜುವಾತು, ಋಣ, ಋತುಮಾನ
- "ಐ" ಮತ್ತು "ಔ"ಗಳ ಸ್ವರೂಪ:
ಮೇಲಿನ ವರ್ಣಗಳು ಎರಡು ವಿಭಿನ್ನ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಯಲ್ಲಿ "ಐ"ಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ "ಔ"ಕಾರವು ಜನಿಸಿದೆ. ಈ ಎರಡು ಸ್ವರಗಳು ವಿಜಾತೀಯ ಸ್ವರಗಳ ಸಂಧಿಯಿಂದ ಆಗಿದ್ದು, ತಮ್ಮ ದೀರ್ಘ ಸ್ವರೂಪದಿಂದಲಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರುತ್ತವೆ.
ವ್ಯಂಜನದ ವಿಧಗಳು
ವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ "ಕ್"ನಿಂದ "ಮ್"ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ.
- ಕ ಖ ಗ ಘ ಙ
- ಚ ಛ ಜ ಝ ಞ
- ಟ ಠ ಡ ಢ ಣ
- ತ ಥ ದ ಧ ನ
- ಪ ಫ ಬ ಭ ಮ
"ಯ"ಕಾರದಿಂದ "ಳ"ಕಾರದ ವರೆಗಿನ ವ್ಯಂಜನಗಳನ್ನು ಅವರ್ಗೀಯ ವ್ಯಂಜನಗಳೆನ್ನುತ್ತೇವೆ.
- ಯ ರ ಲ ವ ಶ ಷ ಸ ಹ ಳ
ಭಾರತದ ರಾಜ್ಯಗಳ ರಚನೆ ಮಾನದಂಡಗಳು ಭಾಷೆ [ ಮತ್ತು ರಾಜಕಾರಣಿಗಳು ಈ ದಿನಗಳಲ್ಲಿ ! ] . ಭಾರತ 1950 ರಲ್ಲಿ ಭಾಷಾವಾರು ಪ್ರಾಂತ್ಯಗಳು ರೂಪುಗೊಂಡವು ಅದೇ ವರ್ಷದ ಗಣರಾಜ್ಯವಾದ . ಮೈಸೂರು ರಾಜ್ಯವನ್ನು ದಕ್ಷಿಣ ಭಾರತದಲ್ಲಿ ಅಂತಹ ರಾಜ್ಯವಾಗಿದೆ .ಮೈಸೂರು ರಾಜ್ಯದ ರಾಜರ ಆಳ್ವಿಕೆಯ ಪ್ರದೇಶಗಳಾಗಿದ್ದವು. ಈಗಿನ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಎಂದು ಹಲವಾರು ಜಿಲ್ಲೆಗಳಿಗೆ , ಹೊಸ ರಾಜ್ಯದಲ್ಲಿ ಕರಗಿದ. ಮೈಸೂರು ರಾಜ್ಯದ ಹೆಸರು ನವೆಂಬರ್ 1 , 1973 ರಂದು ಕರ್ನಾಟಕ ಬದಲಾಯಿಸಲಾಯಿತು .
ರಾಜ್ಯದ ಕೊನೆಯಲ್ಲಿ ದೇವರಾಜ ಅರಸು ನಂತರ ಮುಖ್ಯಮಂತ್ರಿ ಈ ಹೆಗ್ಗುರುತು ನಿರ್ಧಾರ ತೆಗೆದುಕೊಂಡಿತು . ಅಧಿಕೃತವಾಗಿ ಹೊಸ ರಾಜ್ಯದ ನವೆಂಬರ್ 1 ರಂದು ಉದಯಿಸಿತು, ಮತ್ತು ಈ ದಿನವನ್ನು ರಾಜ್ಯದಲ್ಲಿ ಪ್ರತಿ ವರ್ಷ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ . ಈ ಜನಪ್ರಿಯವಾಗಿ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಕರೆಯಲಾಗುತ್ತದೆ .
ಆರಂಭದಲ್ಲಿ ಹೆಸರು ಬದಲಾವಣೆ ಎಲ್ಲಾ ಮೂಲಕ ಅವರುಗಳಿಗೆ ಉತ್ತೇಜನ ನೀಡಲಾಯಿತು ಮಾಡಲಾಯಿತು . ಹೆಸರು ಕನ್ನಡ ಮತ್ತು ಕರ್ನಾಟಕದ ಏಕತೆಯ ಪ್ರಜ್ಞೆ ಬಡಿದೆಬ್ಬಿಸಿತು . ಆದರೆ ಕಳೆದ ಕೆಲವು ವರ್ಷಗಳಲ್ಲಿ ಇದು ಉತ್ಸಾಹ ಎಲ್ಲಾ ಆದರೆ ಅಲ್ಪಾಯುಷ್ಯದ ಯೂಫೋರಿಯಾ ಎಂದು ಎಲ್ಲಾ ಸಮಂಜಸ ಅನುಮಾನಗಳನ್ನು ಮೀರಿ ಸಾಬೀತಾಯಿತು ಇದೆ .
ಕರ್ನಾಟಕ ಆಹ್ಲಾದಕರ ಮನಸ್ಥಿತಿ ಇರುತ್ತದೆ ನವೆಂಬರ್ 1 ಬಂದು . ಈ ದಿನ ಸರ್ಕಾರಿ ರಜಾ. ಕೆಲವೇ ಕನ್ನಡ ಪಠಣ ಬೀದಿಗಳಲ್ಲಿ ಮತ್ತು ಸಮುದಾಯ ಕೇಂದ್ರಗಳಲ್ಲಿ ಔಟ್ ಎಂದು . ಜನರು ಒಂದು ರಜಾ ಉಡುಗೊರೆ ಅನುಭವಿಸುವಿರಿ . ಅಗತ್ಯವಾಗಿ ಕರ್ನಾಟಕ ತಂಪಾದ ಮತ್ತು ಶಾಂತಿಯುತ ಅರ್ಥವಲ್ಲ . ರಾಜ್ಯದ ವರ್ಣ ಸಾಕ್ಷಿಯಾಗಿವೆ ಮತ್ತು ಸಮಾಜದ ಒಂದು ಭಾಗ ಈಗ ತದನಂತರ ಜರೆಯುತ್ತಾನೆ ಮಾಡಲಾಗಿದೆ . ಕಾರಣ: ಕನ್ನಡ ಮತ್ತು ತಮಿಳು , ತೆಲುಗು ಮತ್ತು ಹಿಂದಿ ಇತರ ಭಾಷೆಗಳ ಪ್ರಾಬಲ್ಯ ಬಳಸಿಕೊಂಡು ಜನರ ಸಂಖ್ಯೆಯನ್ನು ಅಭಾವವಿರುವ .
ಸರ್ಕಾರ ಸಾಕಷ್ಟು ಇರಿಸಿಕೊಳ್ಳಲು . ಇದು ಸಹ ಒಂದು ಸಮಿತಿ ಕನ್ನಡ Kavalu ಸಮಿತಿ ( ಕನ್ನಡ ವಾಚ್ ಡಾಗ್ ) ಎಂಬ ರೂಪುಗೊಂಡ 1993 ರಲ್ಲಿ ಕನ್ನಡ ಜಾಗೃತಿ ವರ್ಷ ವೀಕ್ಷಿಸಲು ಕರೆ ನೀಡಿದರು .
ನಾಯಿ ವೀಕ್ಷಿಸುತ್ತಿದ್ದಾರೆ? ಯಾವುದೇ ಭಾಷೆ ನಿಜವಾದ ಪ್ರೇಮಿಗಳು ವಿಷಾದಿಸುತ್ತಾನೆ. ನಾವು ಯಾವುದೇ ನಮಗೆ ವೀಕ್ಷಿಸಲು ಬಯಸುವುದಿಲ್ಲ , ನಾವು ನಮ್ಮ ಸ್ವಂತ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ... ಉಳಿದ ಹೇಳುತ್ತಾರೆ .
ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯದ ಕೊಡುಗೆ ಜನರಿಗೆ ನೀಡಲಾಗುತ್ತದೆ ಇದು ಪ್ರತಿ ವರ್ಷ , ಪ್ರಕಟಿಸಿತು .
1999 ರಿಂದ, ಬೆಂಗಳೂರು ಭಾರತದ ಅತ್ಯಂತ ಜನಪ್ರಿಯ ಹೊಂದಿದೆ ಮತ್ತು BangaloreIT.com ಎಂಬ ಐಟಿ ಪ್ರದರ್ಶನ envied .
ಲಿಪ್ಯಂತರಣ
ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.ಇದನ್ನು ಸಿದ್ಧಪಡಿಸಿಕೊಟ್ಟವರು ಕೆ.ಪಿ.ರಾವ್‍ರವರು.
ಕನ್ನಡ ಅಂಕೆಗಳು
ಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ.
ಕನ್ನಡ ಅಂಕೆಗಳು | ಇಂಡೋ ಅರೇಬಿಯನ್ ಅಂಕೆಗಳು | ||
---|---|---|---|
೦ | ಸೊನ್ನೆ | 0 | |
೧ | ಒಂದು | 1 | |
೨ | ಎರಡು | 2 | |
೩ | ಮೂರು | 3 | |
೪ | ನಾಲ್ಕು | 4 | |
೫ | ಐದು | 5 | |
೬ | ಆರು | 6 | |
೭ | ಏಳು | 7 | |
೮ | ಎಂಟು | 8 | |
೯ | ಒಂಬತ್ತು | 9 |